ಕೊಳ್ತಿಗೆ ಗ್ರಾಮ,ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಗೆ ಸೇರಿರುತ್ತದೆ. ಈ ಗ್ರಾಮಕ್ಕೆ ರಾಜ್ಯ ಹೆದ್ದಾರಿಯಲ್ಲಿ ಅಮ್ಚಿನಡ್ಕ, ಮಾಡಾವು, ನೆಟ್ಟಾರು, ಐವರನಾಡುನಿ೦ದ ರಸ್ತೆ ಸಂಪರ್ಕ ಪಡೆಯಬಹುದು. ಇದು ಪುತ್ತೂರು ತಾಲೂಕು ಕೇಂದ್ರದಿಂದ ೨೩ ಕಿಮಿ ಮತ್ತು ಜಿಲ್ಲಾ ಕೇಂದ್ರ ಮಂಗಳೂರಿನಿಂದ ೭೫ ಕಿಮೀ ಪೂರ್ವಕ್ಕಿದೆ. ಇಲ್ಲಿನ ಪೆರ್ಲಂಪಾಡಿ ಅಂಚೆ ಪಿನ್ ೫೭೪೨೧೨ ಆಗಿದೆ. == ಭೌಗೋಳಿಕ ವಿವರಗಳು == ಈ ಗ್ರಾಮ ಅಂದಾಜು ೬೧೨೩ಸಾವಿರ ಜನಸಂಖ್ಯೆಯಿ೦ದ ಕೂಡಿದ್ದು ೩೧೩೮ಚದರ ಹೆಕ್ಟಾರ್ ವಿಸ್ತೀರ್ಣ ಹೊಂದಿದೆ. ಇಲ್ಲಿ ಸುಮಾರು ೧೧೪೪ ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದಲ್ಲಿ ೭ ಸರಕಾರಿ ಕಿರಿಯ ಮತ್ತು ಹಿರಿಯ ಶಾಲೆಗಳು, ಒಂದು ಪ್ರೌಢ ಶಾಲೆ, ೧೦ ಅಂಗನವಾಡಿ ಕೇಂದ್ರ, ೨ ದೇವಾಸ್ಥಾನ, ಹಾಲಿನ ಡೈರಿ, ೨ ಬ್ಯಾಂಕ್ ಗಳ ಉಪ ಕಚೇರಿ, ಸರಕಾರಿ ಆಸ್ಪತ್ರೆ, ಅರಣ್ಯ ಇಲಾಖೆ ಯ ಕಚೇರಿ, ಅಂಬೇಡ್ಕರ್ ಭವನ ಹಾಗೂ ಸರಕಾರಿ ಗ್ರಂಥಾಲಯವಿದೆ. == ಉದ್ಯೋಗ == ಇಲ್ಲಿನ ಜನರ ಮುಖ್ಯ ಉದ್ಯೋಗ ಕೃಷಿ ಮುಖ್ಯವಾಗಿ ಅಡಿಕೆ ,ತೆಂಗು, ರಬ್ಬರ್, ಕರಿಮೆಣಸು, ಕೋಕೋ,ಗೇರು ಬೀಜವಿದೆ. == ಶಾಲೆಗಳು == === ಪ್ರಾಥಮಿಕ ಶಾಲೆ === ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿಕಾನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಕ್ಕಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರ್ಲಂಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ === ಪ್ರೌಢಶಾಲೆ === ಶ್ರೀ ಷಣ್ಮುಖ ದೇವ ಪ್ರೌಢ ಶಾಲೆ, ಪೆರ್ಲಂಪಾಡಿ == ಉಲ್ಲೇಖಗಳು ==